ಬುಧವಾರ, ನವೆಂಬರ್ 25, 2009

Shikshana Parivarthaneyaagi Kalaashikshanavaagali

ಶಿಕ್ಷಣ  ಪರಿವರ್ತನೆಯಾಗಿ  ಕಲಾ  ಶಿಕ್ಷಣವಾಗಲಿ               
       

                ಅನುಭವ: ಬಾಹ್ಯ  ರೂಪದಿಂದ  ಪಡೆಯುವ  ಜ್ಞಾನ      

                ಕಲೆ :    ಅಂತರಂಗದಿಂದ  ವ್ಯಕ್ತಪಡಿಸುವ  ಜ್ಞಾನ
                ಅನುಭವವನ್ನು  ಅನುಕರಿಸಬಹುದು, ಆದರೆ
                ಕಲಾ  ಸಾಮರ್ಥ್ಯವನ್ನು  ಅನುಕರಿಸಲು  ಸಾಧ್ಯವಿಲ್ಲ
                ಅನುಭವ  ಕೇವಲ  ಅನುಕರಣೆಯಾಗಿ  ಉಳಿಯಬಲ್ಲದು, ಆದರೆ
                ಕಲೆ  ವ್ಯಕ್ತಿಯ  ವ್ಯಕ್ತಿತ್ವವನ್ನೇ  ಪರಿವರ್ತನೆ  ಮಾಡಬಲ್ಲದು 


ಪ್ರವೃತ್ತಿ, ವೃತ್ತಿ, ಸಂಸ್ಕೃತಿ  ಇವು  ಒಂದಕ್ಕೊಂದು  ಸಮನ್ವಯ  ರೂಪದಲ್ಲಿ  ಸಂಯೋಜನೆಗೊಂಡು  ಬದುಕು  ಹಾಗು  ಜೀವನದೊಂದಿಗೆ  ಚಲಿಸುವ   ಕ್ರಿಯಾ  ವಿಧಾನಗಳಾಗಿವೆ, ಆದ್ದರಿಂದ  ಶಿಕ್ಷಣದಲ್ಲಿ  ಕೇವಲ  ಅನುಕರಣೀಯ  ಅನುಭವ  ಮತ್ತು  ಭಾಷೆ, ಸಾಹಿತ್ಯದ  ಮೂಲಕವೇ  ಮಾಹಿತಿಗಳ  ಗ್ರಹಿಕೆ  ಇವು  ಹೆಚ್ಚು  ಪ್ರಮಾಣದಲ್ಲಿರುವ  ಅಭ್ಯಾಸಕಿಂತಲೂ  ಚಿಂತನಾ  ಸಾಮರ್ಥ್ಯದ  ಬೆಳವಣಿಗೆಗೆ  ಅವಕಾಶವಾಗುವಂತಹ  ಮತ್ತು  ಪರಿವರ್ತನಾ  ಸಾಮರ್ಥ್ಯವು  ಬೆಳೆಯುವಂತ  ಪ್ರಾರಂಭಿಕ  ಅಭ್ಯಾಸವು  ಮಕ್ಕಳಿಗೆ  ಎಳೆಯ  ವಯಸ್ಸಿನಲ್ಲಿ  ಪ್ರಾಥಮಿಕ   ಶಿಕ್ಷಣದಲ್ಲಿಯೇ   ಅಳವಡಿಸಿಕೊಂಡಲ್ಲಿ  ವಿದ್ಯಾರ್ಥಿಗಳು  ಹಂತ ಹಂತವಾಗಿ  ಪ್ರತಿ  ವಿಷಯದಲ್ಲೂ  ಚಿಂತನಾ  ಸಾಮರ್ಥ್ಯದೊಂದಿಗೆ  ಕುಶಲತೆ ಬೆಳೆದು  ಉತ್ತಮ  ಕಲಾವಂತರಾಗಲು  ಸಾಧ್ಯವಾಗಬಲ್ಲದು. ಇಂತಹ  ಚಿಂತನಾ  ಹಾಗು  ಪರಿವರ್ತನಾ  ಸಾಮರ್ಥ್ಯವು  ಶೀಘ್ರ  ಕಡಿಮೆ  ವೆಚ್ಚ, ಹೆಚ್ಚು  ಶ್ರಮವಿಲ್ಲದೆ  ಹಾಗು  ಸುಲಭ  ವಿಧಾನದಲ್ಲಿ  ಬೆಳವಣಿಗೆಯಾಗಲು ಉತ್ತಮ  ಅವಕಾಶವಿರುವುದು  ಚಿತ್ರಕಲಾ  ಅಭ್ಯಾಸದಲ್ಲಿ  ಮಾತ್ರ, ಕೇವಲ  ಆಕಾರಗಳ  ಕಲ್ಪನೆಯ  ಮೂಲಕವೇ  ವಿಶ್ವದಲ್ಲಿ  ಮಾನವ  ನಿರ್ಮಿತ  ಯಾವುದೇ  ವಸ್ತುಗಳ  ವಿನ್ಯಾಸದಲ್ಲಿ  ಪರಿವರ್ತನೆಯ  ಸಾಮರ್ಥ್ಯ  ಹಾಗು  ಹೊಸ  ರೂಪದ  ವಸ್ತುವಿನ  ಕಲ್ಪನೆಯ  ಸೃಷ್ಠಿಗೆ  ಪ್ರೇರಣೆ  ಮೂಲಕ  ಕ್ರಮಬದ್ಧವಾಗಿ  ಚಿಂತನಾ  ಕ್ರಿಯೆ  ನಡೆಯಲು  ಚಿತ್ರಕಲಾ  ಪ್ರಾರಂಭಿಕ  ಅಭ್ಯಾಸ    ಮಾತ್ರ  ನೆರವು  ನೀಡಬಲ್ಲದು. ಕೇವಲ ಸಂಬಂಧಿಸಿದ  ವೃತ್ತಿ  ಶಿಕ್ಷಣ  ಮತ್ತು  ತರಬೇತಿ  ಹಂತಕ್ಕೆ  ಹೋದಾಗ   ಮಾತ್ರ  ಅವಶ್ಯ  ವಸ್ತುಗಳ  ಆಕಾರ  ಕಲ್ಪನೆಗಳ  ಬಗ್ಗೆ  ಪರಿತಪಿಸುವುದಕ್ಕಿಂತಲೂ  ಭಾಷಾ  ಅಭ್ಯಾಸದಂತೆಯೇ  ಚಿತ್ರಕಲಾ  ಪ್ರಾರಂಭಿಕ  ಅಭ್ಯಾಸವು  ಸಹ  ಮಕ್ಕಳಿಗೆ  ಪ್ರಾರಂಭಿಕ  ಹಂತದಿಂದಲೇ  ಶಿಕ್ಷಣದಲ್ಲಿ  ಅಳವಡಿಸಿದಲ್ಲಿ  ವಸ್ತುಗಳ  ಆಕಾರ  ಕಲ್ಪನೆಗಳ  ಜೊತೆಗೆ  ಚಿಂತನಾ  ಸಾಮರ್ಥ್ಯವು  ಬೆಳವಣಿಗೆಯಾಗಬಲ್ಲದು. ಭಾಷೆ,  ಸಾಹಿತ್ಯವು  ವಿಷಯ  ಸಾಮರ್ಥ್ಯವನ್ನು  ಹೆಚ್ಚಿಸುತ್ತದೆ  ಆದರೆ  ಚಿತ್ರಕಲೆ  ಅಭ್ಯಾಸದಿಂದ  ಪ್ರತ್ಯಕ್ಷ  ಹಾಗು  ಪ್ರಾಯೋಗಿಕವಾಗಿ  ವೈಜ್ಞಾನಿಕ  ಮನೋಭಾವನೆ, ತಂತ್ರಜ್ಞಾನ  ಮತ್ತು  ಚಿಂತನಾ  ಸಾಮರ್ಥ್ಯ  ಬಹು ಬೇಗನೆ  ರೂಢಿಸಿಕೊಳ್ಳ ಬಹುದಾಗಿದೆ.

ಚಿತ್ರ  ಕುಶಲತೆಗೆ  ಗಣಕ  ಯಂತ್ರದಲ್ಲೂ  ಆಕಾರಗಳ  ಪರಿಕಲ್ಪನೆಗೆ  ಸಿದ್ಧ  ಮೂಲಾಂಶಗಳ  ಅನುಕೂಲವಿದ್ದರೂ , ಹಸ್ತ  ಕುಶಲತೆಯ  ಸಾಮರ್ಥ್ಯದಿಂದ  ಸಿಗುವ  ಮೆಚ್ಚುಗೆ , ತೃಪ್ತಿ  ಗಣಕಯಂತ್ರದ  ಚಾಲನೆಯಲ್ಲಿ  ಸಿಗಲಾರದು . ಗಣಕ  ಯಂತ್ರ  ನಿರಂತರ  ಅಭ್ಯಾಸಕ್ಕಾಗಲಿ  ಮತ್ತು   ಸಾಂದರ್ಭಿಕ  ಚಿಂತನೆಯಿಂದ  ಆಸಕ್ತಗೊಂಡಾಗ  ತನ್ನ  ಕಾಲ್ಪನಿಕ  ಪ್ರತಿಭೆಯನ್ನು  ಹೊರಹೊಮ್ಮಿಸಲು  ಎಲ್ಲ  ಮಕ್ಕಳಿಗೂ  ಕಡಿಮೆ  ವೆಚ್ಚ  ಹಾಗು  ಸುಲಭದಲ್ಲಿ  ಸಿಗಲಾರದ  ವಸ್ತು. ಹಸ್ತ  ಕುಶಲತೆಯ  ಮತ್ತು  ಗಣಕಯಂತ್ರದ  ಚಾಲನೆಯ  ಕುಶಲತೆಯ  ಬೆಳವಣಿಗೆಯ  ಕಲಾ  ಪರಿವರ್ತನೆಯಲ್ಲಿ  ಅಂದರೆ  ವೈಜ್ಞಾನಿಕ ಮನೋಬಾವನೆ, ತಂತ್ರಜ್ಞಾನ  ಮತ್ತು  ಚಿಂತನೆ  ಇವುಗಳ  ಕಾರ್ಯ  ವೈಖರಿಗಳಲ್ಲಿ  ಭಿನ್ನತೆ  ಇರುತ್ತದೆ. ಕೈ  ಬರವಣಿಗೆಯ  ಅಕ್ಷರ ಅಭ್ಯಾಸವನ್ನು  ಕಲಿಯಲು  ಗಣಕ ಯಂತ್ರದಲ್ಲಿಯು  ಸುಲಭ  ಅವಕಾಶವಿದ್ದರೂ  ಕೈ ಬರವಣಿಗೆಯ  ಅಕ್ಷರ  ಹಸ್ತ  ಅಭ್ಯಾಸವನ್ನು  ಕಡೆಗಣಿಸಲು  ಸಾಧ್ಯವಾದೀತೆ.

ಭಾಷಾ  ಬರವಣಿಗೆಯ  ಸಾಮರ್ಥ್ಯಕ್ಕೆ  ಸುಲಭ  ವಿಧಾನದ  ಪ್ರಾರಂಭಿಕ  ಅಭ್ಯಾಸದ  ವ್ಯವಸ್ಥೆಯಿದೆ, ಅಕ್ಷರ, ಪದ, ವಾಕ್ಯ, ವಾಕ್ಯವೃಂದ  ನಂತರ  ಭಾಷೆ  ಹೀಗೆ  ಎಲ್ಲ  ಮಕ್ಕಳಿಗೂ  ಸುಲಭ  ವಿಧಾನದಲ್ಲಿ  ಕಲಿಯಲು ಅವಕಾಶವಿದೆ, ಹಾಗೆಯೇ  ಚಿತ್ರ  ರಚನಾ  ಸಾಮರ್ಥ್ಯಕ್ಕೂ  ಸಹ  ಎಲ್ಲ  ಮಕ್ಕಳು  ಆಸಕ್ತಿಯೊಂದಿಗೆ  ಕಲಿಯಲು  ಇಂತಹ  ಒಂದು  ಸುಲಭ  ವಿಧಾನದ  ಭಾಷೆಯ  ಪ್ರಾರಂಭಿಕ  ಅಭ್ಯಾಸವನ್ನೇ  ಆಧಾರವಾಗಿಟ್ಟುಕೊಂಡು  ಅಂದರೆ  ಅಕ್ಷರಗಳು, ಪದ  ರಚನೆ, ವಾಕ್ಯ  ರಚನೆ, ವಾಕ್ಯ ವೃಂದ  ನಂತರ  ಭಾಷಾ  ಬರವಣಿಗೆ  ಹೀಗೆ  ಹಂತ  ಹಂತವಾಗಿ  ಕಲಿಯುವ   ಪ್ರಾರಂಭಿಕ  ಅಭ್ಯಾಸದಂತೆಯೇ  ಕ್ರಮವಾಗಿ  ರೇಖೆಗಳು, ಆಕಾರ  ರಚನೆ, ಆಕೃತಿ ರಚನೆ, ಘನಾಕೃತಿ  ರಚನೆ ನಂತರ  (ಬಯಸಿದ) ಪೂರ್ಣ  ವಸ್ತುಚಿತ್ರ  ರಚನೆ  ಹೀಗೆ  ಹಂತ  ಹಂತವಾಗಿ  ಅಭ್ಯಾಸ  ಮಾಡಲು  ಚಿತ್ತಾರ  ರಚನೆಯ  ಒಂದು  ಪರಿಕಲ್ಪಿತ  ವ್ಯವಸ್ಥೆಯನ್ನು  ಕಂಡುಕೊಂಡು, ಈ  ವ್ಯವಸ್ಥೆಯನ್ನು  ಕಲೆ, ಕಲಾ ಭಾಗಗಳು, ಚಿತ್ರಕಲೆಯ  ಉಪಯೋಗ, ಚಿತ್ರಗಳಿಂದ  ಶೀಘ್ರ  ಮಾಹಿತಿ  ಅಲ್ಲದೆ  ಅನುಕರಣೆ, ವೀಕ್ಷಣೆ  ಮತ್ತು  ಚಿಂತನಾ


ಚಿತ್ರ ರಚನಾ  ವಿಧಾನದ  ಪ್ರಾರಂಭಿಕ  ಅಭ್ಯಾಸದ  ಹಂತಗಳ  ಬಗ್ಗೆ  ಈಗಾಗಲೇ  ದಿನಾಂಕ: ೧೨.೧೧.೧೯೯೮  ರಂದು  ಹರಿಹರ, ೨೩.೧೧.೯೮  ರಂದು  ಚಿತ್ರದುರ್ಗ, ೦೩.೧೨.೯೮  ರಂದು  ಹೊಳಲ್ಕೆರೆ, ೦೪.೧೨.೯೮  ರಂದು  ಹೊಸದುರ್ಗ, ೧೬.೧೨.೯೮  ರಂದು  ಹಿರಿಯೂರು  ನಂತರ  ೨೪.೦೯.೯೯  ರಂದು  ಜಗಳೂರು  ಈ  ಸ್ಥಳಗಳಲ್ಲಿ  ಪ್ರಾಥಮಿಕ  ಮತ್ತು  ಮಾಧ್ಯಮಿಕ  ಶಾಲಾ  ಶಿಕ್ಷರಿಗೆ  ಬುನಾದಿ  ತರಬೇತಿ  ಸಂದರ್ಭದಲ್ಲಿ  ಸಂಪನ್ಮೂಲ  ವ್ಯಕ್ತಿಯಾಗಿ  ಕಲಾ  ಶಿಕ್ಷಣದ  ಬಗ್ಗೆ  ಮಾರ್ಗದರ್ಶನ  ಹಾಗು  ನಿಯೋಜನೆಯ  ಮೂಲಕ  ದಾವಣಗೆರೆಯ  ಜಿಲ್ಲಾ  ಶಿಕ್ಷಣ  ಮತ್ತು  ತರಬೇತಿ  ಸಂಸ್ಥೆಯ  ಡಿ.ಇಡಿ. (ಟಿ.ಸಿ.ಎಚ್.)  ಶಿಕ್ಷಣಾರ್ಥಿಗಳಿಗೂ  ದಿನಾಂಕ: ೨೦.೦೮.೧೯೯೮  ರಿಂದ  ೩೦.೦೯.೨೦೦೬  ರ  (ಸೇವೆಯಿಂದ  ನಿವೃತ್ತಿಯಾಗುವ) ವರೆಗೂ  ಮೇಲ್ಕಂಡ  ಕಲೆ, ಕಲಾ ಬಾಗಗಳು, ಚಿತ್ರಕಲೆಯ  ಉಪಯೋಗ, ಚಿತ್ರಗಳಿಂದ  ಶೀಘ್ರ  ಮಾಹಿತಿ, ಚಿತ್ರಕಲಾ  ಪ್ರಾರಂಭಿಕ  ಅಭ್ಯಾಸ  ಅಂದರೆ  ಅನುಕರಣೆ, ವೀಕ್ಷಣೆ  ಮತ್ತು  ಚಿಂತನೆ  ಚಿತ್ರ ರಚನಾ  ವಿಧಾನದ  ಬಗ್ಗೆ  ಮಾಹಿತಿ  ಅಲ್ಲದೆ  ಸುಲಭಚಿತ್ರ  ರಚನೆಯ  ಅಭ್ಯಾಸದ  ಬಗ್ಗೆಯೂ  ಮಾರ್ಗದರ್ಶನ  ನೀಡಿದ್ದೇನೆ. ಅಂದು  ೧೯೯೮  ರ  ವರೆಗೂ  (ಚಿತ್ರಕಲಾ  ಪುಸ್ತಕಗಳ  ಹೊರತು) ಕೇವಲ  ನಾಲ್ಕು, ಐದು  ಚಿತ್ರಗಳು  ಇರುತ್ತಿದ್ದ  ಯಾವುದೇ ಪಾಠದ ಪುಸ್ತಕಗಳು, ನಂತರ  ೨೦೦೦ ನೇ  ವರ್ಷದಿಂದ  ಈಚೆಗೆ  ರೂಪಿಸಲಾಗುತ್ತಿರುವ  ಎಲ್ಲ  ಪಾಠದ ಪುಸ್ತಕಗಳಲ್ಲಿ  ಚಿತ್ರಗಳೇ  ಹೆಚ್ಚು  ಪ್ರಮಾಣದೊಂದಿಗೆ  ವಿಜ್ರಮಿಸುತ್ತಿದ್ದು, (ಬುನಾದಿ  ತರಬೇತಿ  ಸಂದರ್ಭದಲ್ಲಿ  ಕಲಾ  ಶಿಕ್ಷಣದ  ಮಾರ್ಗದರ್ಶನ  ಪಡೆದ  ಮೇಲ್ಕಂಡ  ಶಿಕ್ಷರಿಗೆ  ಮತ್ತು  ಶಿಕ್ಷಣಾರ್ಥಿಗಳಿಗೆ  ಮಾರ್ಗದರ್ಶನದ  ಪರಿಣಾಮದ  ಬಗ್ಗೆ  ಮನಗಂಡಿರಬಹುದು  ಎಂದುಕೊಂಡಿದ್ದೇನೆ) ಇದು  ಉತ್ತಮ  ಜ್ಞಾನಾಭಿವೃದ್ಧಿಯ  ಬೆಳವಣಿಗೆಗೆ  ಮಾತ್ರ  ದಾರಿದೀಪವಾಗಲು  ಕಾರಣವಾಗಿದೆ, ಆದರೆ  ಇಷ್ಟು  ಮಾತ್ರಕ್ಕೆ  ಪ್ರತಿಯೊಬ್ಬ  ವ್ಯಕ್ತಿಗೂ  ಬದುಕಿನ  ಕುಶಲತೆ, ಬದುಕಿನ  ಕಲೆಗೆ  ತಕ್ಕ  ಅವಕಾಶವಾಗಿದೆ  ಎಂದು  ತಿಳಿಯುವುದು  ತಪ್ಪಾಗಬಹುದು. ಸಾಹಿತ್ಯ  ಸಾಂದರ್ಭಿಕ   ಚಿತ್ರಗಳನ್ನಷ್ಟೇ  ಹೊತ್ತು  ಶಿಕ್ಷಣದಲ್ಲಿ  ಸಾಗಿದರೆ  ಮಾಹಿತಿಗಳು  ಮಾತ್ರ  ಶೀಘ್ರ  ಲಭ್ಯವಾಗಬಲ್ಲವು. ಆದರೆ  ಇದು  ಕೇವಲ  ಪ್ರಯಾಣಿಕರನ್ನು  ಹೊತ್ತು  ಸಾಗುವ  ಜಟಕಾ  ಬಂಡಿಯ  ಮೋಜಿನ  ಕುದುರೆಯಂತಾಗಬಾರದು, ಅಥವಾ  ಸಾಮಗ್ರಿಗಳನ್ನು  ಹೊತ್ತು  ಸಾಗುವ  ಒಂಟಿ  ಎತ್ತಿನ ಗಾಡಿಯಂತಾಗಬಾರದು, ಸಾಹಿತ್ಯ  ತನಗಿಂತಲೂ  ಶಿಘ್ರ  ಮಾಹಿತಿಯನ್ನು  ನೀಡಬಲ್ಲ  ಮತ್ತು  ಬದುಕಿನ  ಕುಶಲತೆಗೆ ಸಾಂದರ್ಭಿಕ  ಅವಶ್ಯ  ವಸ್ತುಗಳ  ವಿನ್ಯಾಸವನ್ನು  ಪರಿವರ್ತಿಸುವ  ಚಿಂತನ  ಸಾಮರ್ಥ್ಯವನ್ನು  ಪಡೆಯಲು  ಅವಕಾಶವಿರುವ  ವ್ಯವಸ್ಥಿತ  ಚಿತ್ರಕಲಾ  ಅಭ್ಯಾಸದೊಂದಿಗೆ  ಸಮ  ವ್ಯವಸ್ಥಿತ  ಯೋಜನೆಯ  ಮೂಲಕ, ಅಂದರೆ  ಸಾಹಿತ್ಯ  ಮತ್ತು  ಚಿತ್ರಕಲೆ  ಇವು  ಎರಡು  ಜೋಡಿ  ಎತ್ತಿನಂತೆ  ಜೊತೆಗೂಡಿ  ಬೇಸಾಯದೊಂದಿಗೆ  ಉತ್ತಮ  ಬೆಳೆಯನ್ನು  ತೆಗೆಯುವಂತೆ  ಉತ್ತಮ  ಕಲಾವಂತರನ್ನು  ಸೃಷ್ಠಿಸುವಂತ  ವ್ಯವಸ್ಥೆಯೊಂದಿಗೆ  ಕಲಾಶಿಕ್ಷಣವಾಗಬೇಕು  ವಿವಿಧ  ಚಿತ್ರಕಲಾ  ಪುಸ್ತಕಗಳಲ್ಲಿ, ಚಿತ್ರಪಟಗಳಲ್ಲಿ  ಚಿತ್ರಗಳನ್ನು  ನೋಡಿ  ಅನುಕರಿಸುವ  ಮೂಲಕ  ಅನುಕರಣೆಯ  ಚಿತ್ರಾಭ್ಯಾಸ, ವಿವಿಧ  ವಸ್ತುಗಳನ್ನು  ಗ್ರಹಿಸುವ  ಮೂಲಕ  ಹಂತ ಹಂತವಾಗಿ  ವಸ್ತುಗಳ  ಆಕಾರ, ಅಳತೆ, ಪ್ರಮಾಣಗಳ  ಪ್ರತ್ಯಕ್ಷ  ಪ್ರಾಯೋಗಿಕ  ವೀಕ್ಷಣಾ  ಚಿತ್ರಾಭ್ಯಾಸ, ನಂತರ  ಚಿಂತನ  ಚಿತ್ರಾಭ್ಯಾಸದಲ್ಲಿ  ನೋಡಿದ  ಚಿತ್ರ  ಹಾಗು  ವಸ್ತುಗಳ  ಸ್ಮರಣ  ಚಿತ್ರಾಭ್ಯಾಸದೊಂದಿಗೆ  ಬದುಕಿನ  ವಿವಿಧ  ಕುಶಲತೆಗೆ  ಅನ್ವಯಿಸುವಂತೆ  ವಿವಿಧ  ವಸ್ತುಗಳ  ವಿನ್ಯಾಸದ  ಜೋಡಣೆಯ  ಬಗ್ಗೆಯೂ  ಪ್ರತ್ಯೇಕ  ಪೂರ್ವಾನುಭವದ  ತರಬೇತಿಯೂ  ಆಗಬಲ್ಲದು.

ಭಾಷಾ  ಕಲಿಕೆ  ಕೇವಲ  ಸಾಹಿತ್ಯ  ರಚನೆಯ  ಸಾಮರ್ಥ್ಯಕ್ಕಾಗಿ  ಅಲ್ಲ, ಬದುಕಿನಲ್ಲಿ  ವ್ಯವಹಾರಿಕ  ಉದ್ಯೋಗಕ್ಕೆ  ಎಷ್ಟು  ಅತ್ಯಾವಶ್ಯಕವೋ, ಹಾಗೆಯೇ  ಬದುಕಿನಲ್ಲಿ  ಪ್ರತಿ  ವಸ್ತುವಿನಲ್ಲಿ  ಸಿದ್ಧತೆಯ  ಹಂತದಲ್ಲಿ  ಯಾವುದೇ  ವಸ್ತುಗಳ  ಆಕಾರ, ಅಳತೆ, ಪ್ರಮಾಣಗಳ  ಕಲ್ಪನೆಯಿಂದಲೇ  ವಸ್ತುಗಳ  ವಿನ್ಯಾಸದ  ಪರಿವರ್ತನೆಗೂ  ಚಿತ್ರ  ರಚನಾ  ಸಾಮರ್ಥ್ಯವು  ಅಷ್ಟೇ  ಅತ್ಯಾವಶ್ಯಕವಾಗಿದೆ. ಕಲ್ಲು, ಮರ, ಮಣ್ಣು,  ವಿವಿಧ ಲೋಹ, ಗಾಜು, ಪ್ರಕೃತಿ  ವಸ್ತುಗಳು, ವಿವಿಧ  ಬಣ್ಣದ  ಕಾಗದಗಳು, ಕಚ್ಚಾ  ವಸ್ತುಗಳು  ಇವುಗಳಿಂದ  ಸುಂದರ  ವಿವಿಧ  ಅಲಂಕಾರಿಕ  ವಸ್ತುಗಳು, ಮಾನವ  ನಿರ್ಮಿತ  ವಸ್ತುಗಳು, ಸುಂದರ  ಮೂರ್ತಿಗಳು, ಶಿಲ್ಪಗಳು  ಹಾಗೆಯೇ  ವಾಹನಗಳು, ವಿವಿಧ  ಯಂತ್ರೋಪಕರಣಗಳು, ಬಟ್ಟೆಗಳಿಂದ ಸಿದ್ಧ  ಉಡುಪುಗಳು, ಚಿತ್ರಪಟ, ಜಾಹಿರಾತುಗಳು, ನಾಮಪಲಕಗಳು, ಬ್ಯಾನರ್ ಗಳ  ರಚನೆ, ವಿವಿಧ  ರೀತಿಯಲ್ಲಿ  ನಿರ್ಮಿಸುವ  ಸುಂದರ  ಕಟ್ಟಡಗಳು  ಇತ್ಯಾದಿ  ಯಾವುದೇ  ವಸ್ತುಗಳು  ಆಕಾರ, ಅಳತೆ, ಪ್ರಮಾಣಗಳ  ಕಲ್ಪನೆಯಿಲ್ಲದೆ  ವಿನ್ಯಾಸದಲ್ಲಿ  ಪರಿವರ್ತನೆ  ಮತ್ತು  ಹೊಸ  ರೂಪದ  ವಸ್ತುಗಳ  ತಯಾರಿಕೆ  ಕಷ್ಟಸಾಧ್ಯ, ಹಾಗೆಯೇ  ಸಾಹಿತ್ಯದ  ರಚನೆ, ಸಂಗೀತ, ಅಭಿನಯ, ನೃತ್ಯ  ಅಲ್ಲದೆ  ಚಲನಚಿತ್ರಗಳಲ್ಲಿ  ನಿರ್ದೇಶನ, ದೃಶ್ಯಚಿತ್ರಗಳ  ಶೋಧನೆ, ಸಂಯೋಜನೆ, ತಾಂತ್ರಿಕ  ವರ್ಗ  ಹಾಗು  ಛಾಯಾಗ್ರಹಣ  ಇವು  ಯಾವುವೂ  ಆಕಾರಗಳ ಕಲ್ಪನೆಯಿಲ್ಲದೆ  ಉತ್ತಮ  ನಿರ್ಮಾಣವಾಗಲಿ, ನಟನೆಯಾಗಲಿ, ಕೃತಿಯಾಗಲಿ  ಸೃಷ್ಠಿಯಾಗುವುದು  ಕಷ್ಟಸಾಧ್ಯ. ಇಷ್ಟೇ  ಏಕೆ  ನಂಬಿಕೆ  ಇಟ್ಟಿರುವ  ಭವಿಷ್ಯದ  ಗ್ರಹಿಕೆಯೂ  ಕೂಡ  ಹಸ್ತದ  ರೇಖೆ, ಆಕಾರಗಳಿಂದಲ್ಲವೇ? ಎಂಥಹುದೇ  ಸಾಂದರ್ಭಿಕ   ಸಂಧಿಗ್ಧ  ಸಮಸ್ಯೆಯ  ಪರಿಹಾರದ  ಇತರೆ  ಯಾವುದೇ  ಉದ್ಯೋಗವು  ಸಹ  ಆಕಾರಗಳ  ಕಲ್ಪನೆ  ಇಲ್ಲದೆ  ನಡೆಸಲು  ಸಾಧ್ಯವೇ? ಒಟ್ಟಿನಲ್ಲಿ  ಮಾನವ  ನಿರ್ಮಿಸುವ  ಯಾವುದೇ  ವಸ್ತುಗಳು  ಆಕಾರಗಳ  ಕಲ್ಪನೆಗಳು  ಕೇವಲ  ಆಸಕ್ತಿ  ಮತ್ತು  ಕಲೆಗಾರಿಕೆ  ಇರುವ  ಕೆಲವೇ  ವ್ಯಕ್ತಿಗಳ  ಕೈವಶವಾಗುವುದಕಿಂತ  ಭಾಷಾ  ಕಲಿಕೆಯಂತೆ  ಚಿತ್ತಾರ  ಕಲೆಯ  ಪ್ರಾರಂಭಿಕ  ಅಭ್ಯಾಸದಿಂದ  ಪ್ರತಿಯೊಬ್ಬ  ವ್ಯಕ್ತಿಗೂ  ಸಾಂದರ್ಬಿಕ  ಕುಶಲತೆ  ಸೃಷ್ಠಿಯಾದರೆ  ರಾಷ್ಟ್ರದ  ಸಮಗ್ರ  ಏಳಿಗೆಗೆ  ಉತ್ತಮ   ಅವಕಾಶವಾದಂತಲ್ಲವೇ?

ಎಳೆಯ  ಮಕ್ಕಳ  ಮನಸ್ಸಿಗೆ  ಎಳೆ  ಎಳೆಯಾಗಿಯೇ  ಹೆಚ್ಚು  ಹೊರೆಯಾಗದಿರುವಂತೆ  ಶೀಘ್ರವಾಗಿ  ಮನಕ್ಕೆ  ನಾಟಲು  ಪ್ರಾರಂಭಿಕ  ಅನುಭವ  ಮತ್ತು  ಅಭ್ಯಾಸಗಳು  ಮಾತೃಭಾಷೆ  ಹಾಗು  ಚಿತ್ರಕಲೆಯ  ಪ್ರಾರಂಭಿಕ  ಅಭ್ಯಾಸದೊಂದಿಗೆ  ಉತ್ತಮ  ಕುಶಲತೆಗೆ  ಅನುವಾಗುವಂತೆ  ಪ್ರಾರಂಭಿಕ  ಮೂಲಾಂಶಗಳನ್ನು  ಅಳವಡಿಸಿಕೊಂಡು, ಅಕ್ಷರ ಜ್ಞಾನ, ಪದರಚನೆ  ಸಾಮರ್ಥ್ಯ, ವಾಕ್ಯ  ರಚನೆಯ  ಸಾಮರ್ಥ್ಯದ  ಅಡಿಪಾಯಕ್ಕೆ  ಅನುಕೂಲವಾಗುವಂತೆ  ಓದುವ  ಮತ್ತು  ಬರೆಯುವ  ಅಭ್ಯಾಸ, ಹಾಗೆಯೇ  ವಿವಿಧ  ರೇಖೆಗಳ, ಆಕಾರ, ಆಕೃತಿಗಳ ಅಭ್ಯಾಸ  ಇವು  ಒಂದು  ನಿರ್ಧಿಷ್ಟ  ಹಂತದೊಳಗೆ  ಪೂರೈಸುವ  ವ್ಯವಸ್ಥಿತವಾದಲ್ಲಿ  ಭಾಷಾ  ಕುಶಲತೆ  ಮತ್ತು  ವಸ್ತುಚಿತ್ರ  ರಚನಾ  ಸಾಮರ್ಥ್ಯಕ್ಕೆ  ಪುರ್ವಾನುಭವವು  ಆಗಬಲ್ಲದು  ಮತ್ತು  ತರಗತಿಯ  ಎಲ್ಲ  ಮಕ್ಕಳಿಗೂ  ಚಾಚೂ  ತಪ್ಪದೆ  ಸಂಬಂಧಿಸಿದ  ಜ್ಞಾನವನ್ನು  ನೀಡಲು  ಸಾಕಷ್ಟು  ಸಮಯ  ಅವಕಾಶವೂ  ದೊರೆಯಬಲ್ಲದು.

ಆದಿ  ಮಾನವನಿಗೂ  ಮೊದಲು  ಜ್ಞಾನೋದಯವಾದದ್ದು  ಚಿತ್ತಾರದ  ಕಲೆಯಿಂದಲೇ, ಸೇವಿಸುವ  ಆಹಾರ, ಬಟ್ಟೆ, ವಸತಿ  ಇತ್ಯಾದಿಗಳ  ತಯಾರಿಕೆಯ  ಜ್ಞಾನಕಿಂತಲೂ  ಮುಂಚಿತವಾಗಿ  ಆತನಿಗೆ  ಬಿಡುವಿನ  ಸಮಯದಲ್ಲಿ  ಆತನ  ದೃಷ್ಟಿ ಹರಿದದ್ದು  ಗಿಡ, ಮರ, ಪಕ್ಷಿ, ಪ್ರಾಣಿ  ಹಾಗು  ತನ್ನಂತೆ  ಮನುಷ್ಯರ  ನೆರಳು. ಈ  ನೆರಳುಗಳು  ಆತನಿಗೆ  ಚೆಂದವೆನಿಸಿ  ಹಾಗೆ  ಉಳಿಸಿಕೊಲ್ಲಬೇಕೆನಿಸಿತು. ಉಪಾಯ  ಹೊಳೆಯಿತು, ಚೂಪಾದ  ಕಲ್ಲನ್ನು  ತೆಗೆದುಕೊಂಡ, ಒಬ್ಬ  ವ್ಯಕ್ತಿಯನ್ನು  ನಿಲ್ಲಿಸಿದ, ನೆರಳಿನ  ಅಂಚಿನ  ತುದಿಯನ್ನು  ಹಾಗೆ  ಕೊರೆದ, ವ್ಯಕ್ತಿಯನ್ನು  ಬಳಿಗೆ  ಸರಿಸಿ  ನೋಡಿದ, ಅಲ್ಲಿ  ಒಂದು  ಚಿತ್ರ  ಸೃಷ್ಟಿಯಾಯಿತು. ನಂತರವೇ  ಈ  ಅನುಭವದಿಂದಲೇ  ಕಲ್ಲಿನ  ಬಂಡೆಯ  ಮೇಲೆ  ಚಿತ್ತಾರ  ಬಿಡಿಸುವ  ಸಂದರ್ಭದಲ್ಲಿ  ಕಲ್ಲಿನಿಂದ  ಕಲ್ಲಿಗೆ  ಕೊರೆಯುವಾಗಲೋ  ಅಥವಾ  ಜಜ್ಜುವಾಗಲೋ  ಬೆಂಕಿಯ  ಸೃಷ್ಟಿ, ಹೀಗೆ  ಆಕಾರ  ಅನುಭವದಿಂದ  ಮತ್ತು  ಕ್ರಿಯೆಯ  ಅನುಭ ವದಿಂದ  ವಿವಿಧ  ವಸ್ತುಗಳ  ತಯಾರಿಕೆ  ಹಾಗು  ಆಹಾರ  ಬೇಯಿಸಿಕೊಳ್ಳುವ  ಅನುಭವಕ್ಕೆ  ಮಾರ್ಗವಾದವು  ಎಂಬುದಕ್ಕೆ  ಸಾಕ್ಷಿಯು  ಆಗಬಲ್ಲವು  ಮತ್ತು  ಇವು  ಕೇವಲ  ಕಲ್ಪನೆ  ಎಂದಷ್ಟೇ  ಹೇಳಲು  ಸಹ  ಯಾವ  ಆಧಾರವಿಲ್ಲದೆಯೂ, ಮತ್ತು  ಇದು  ಸತ್ಯಾಂಶವಲ್ಲ  ಎಂದು  ಅಲ್ಲಗಳೆಯಲು  ಸಾಧ್ಯವಿಲ್ಲವಾದೀತು. ವಿಜ್ಞಾನ, ತಂತ್ರಜ್ಞಾನ  ಮತ್ತು  ಚಿಂತನೆ  (ಕಲೆ)  ಇವುಗಳ  ಬಗ್ಗೆ  ಕಿಂಚಿತ್ತು  ಹೆಸರಿನ  ಕಲ್ಪನೆಯೂ  ಇಲ್ಲದ  ಅಂದು ಸಹ ಈ  ಚಿತ್ರ  ಕೃತಿಯ  ಸಂದರ್ಭದಲ್ಲಿಯು  ಈ  ಮೂರೂ  ತಾತ್ವಿಕ  ಅಂಶಗಳು  ಸಂಯೋಜನೆಗೊಂಡು ನಡೆದದ್ದು  ಕಲಾತ್ಮಕ  ಕ್ರಿಯೆಯು  ಹೌದು. ಆಕಾರ, ಅಳತೆ, ಪ್ರಮಾಣಗಳೊಂದಿಗೆ  ಗಮನ  ಸೆಳೆಯುವಂತ  ನೆರಳುಗಳ  ರೂಪ  ಶೋಧನಾತ್ಮಕವಾಗಿ  ಕಂಡದ್ದು  ವೈಜ್ಞಾನಿಕ  ಮನೋಬಾವನೆ, ಇದನ್ನು  ಶಾಶ್ವತವಾಗಿ  ಉಳಿಸಿಕೊಳ್ಳುವ  ಉಪಾಯ  (ಚೂಪಾದ  ಕಲ್ಲಿನಿಂದ  ಕೊರೆಯುವ) ವನ್ನು  ಕಂಡುಕೊಂಡದ್ದು  ತಂತ್ರಜ್ಞಾನ  ಹಾಗೆಯೇ  ಯಥಾವತ್ತಾಗಿ  ನೆರಳಿನ  ರೂಪವನ್ನು  ಒಂದು  ಚಿತ್ರ  ಕೃತಿಯಾಗಿ  ಆಗುವ  ಪರಿವರ್ತನೆಯೊಂದಿಗೆ  ರಚಿತವಾದದ್ದು  ಚಿತ್ತಾರದ  (ಚಿಂತನೆ) ಕಲೆ. ವೈಜ್ಞಾನಿಕ  ಭಾವನೆ  ಅಪೂರ್ಣ, ತಂತ್ರಜ್ಞಾನ  ಅಪೂರ್ಣ ಈ  ಎರಡು  ಹಂತಗಳ  ಜ್ಞಾನಗಳಿಗೆ  ಸಂಬಂಧಿಸಿದ  ಆಕಾರಗಳೊಂದಿಗೆ ಪರಿ ಪೂರ್ಣ   ಗೊಳಿಸುವ  ಸಾಮರ್ಥ್ಯವಿರುವುದು  ಚಿತ್ರ ಜ್ಞಾನಕ್ಕೆ  ಮಾತ್ರ, ಅದೇ  ಚಿಂತನಾ  ಸಾಮರ್ಥ್ಯ  ಅಂದರೆ  ಚಿತ್ತಾರದ  ಕಲೆ. ಆಕಾರ ಅನುಭವದಿಂದಲೇ   ನಂತರ  ನಿತ್ಯ  ಬಳಕೆಯ  ವಸ್ತುಗಳನ್ನು  ಕಾಲ್ಪನಿಕವಾಗಿ  ಬಯಸಿದ  ಆಕಾರಗಳನ್ನು  ಸೃಷ್ಟಿಸಿಕೊಳ್ಳುವ  ಮೂಲಕ  ವಿನ್ಯಾಸದಲ್ಲಿ  ಪರಿವರ್ತನೆ ಗೊಳಿಸಿಕೊಳ್ಳುತ್ತಾ  ಮಾನವ  ನಿರ್ಮಿತ  ವಸ್ತುಗಳೆಲ್ಲವೂ  ನಿರ್ಮಾಣಗೊಳ್ಳುತ್ತಾ  ಬಂದಿವೆ. ಆದರೆ  ಈ  ವಿನ್ಯಾಸಗಳ  ಕುಶಲತೆ  ಪ್ರಾರಂಭಿಕ  ಅಭ್ಯಾಸದ  ಯಾವ  ಪುರ್ವಾನುಭವವೂ ಇಲ್ಲದೆ  ವ್ಯಕ್ತಿಯಿಂದ  ವ್ಯಕ್ತಿಗೆ  ಕೇವಲ  ಕಾಲ್ಪನಿಕ  ಅನುಕರಣೀಯ  ಮೂಲಕ  ಸಾಗಿ  ಬಂದಿ ರುವುದರಿಂದಲೇ  ಇಂತಹ  ಕುಶಲತೆಯ  ಗುಣಮಟ್ಟ  ವ್ಯಕ್ತಿಯ  ಪ್ರುಢಶಾಲಾ ಹಂತಕ್ಕೂ  ಸಹ  ನಿಲುಕದೆ  ಮತ್ತು  ಕೇವಲ  ಆಸಕ್ತಿಯಿರುವ  ಕೆಲವೇ  ವ್ಯಕ್ತಿಗಳ  ಕೈವಶವಾಗುತ್ತಿದೆ. ಇಂತಹ  ಕುಶಲತೆಯು  ಮುಂದಿನ  ಯಾವುದೇ  ವೃತ್ತಿ  ಶಿಕ್ಷಣ  ಮತ್ತು  ತಾಂತ್ರಿಕ  ಶಿಕ್ಷಣಕ್ಕೂ ಇವುಗಳಿಗೆ  ಪುರ್ವಾನುಭವದ  ಪ್ರಾರಭಿಕ  ಅಭ್ಯಾಸ  ಆಗುವುದರೊಂದಿಗೆ  ಅತ್ಯಾವಶ್ಯಕವಾಗಿರುವುದರಿಂದಲೂ  ಮತ್ತು  ಕೇವಲ  ಭಾಷಾ  ರೂಪದಲ್ಲಿ  ಈ  ಕುಶಲತೆಯು  ಮಕ್ಕಳಿಗೆ  ಲಭ್ಯವಾಗುವುದು  ಕಷ್ಟ ಸಾಧ್ಯವಾಗುವುದರಿಂದಲೂ  ಸುಲಭ  ರೂಪದ  ಚಿತ್ತಾರ  ಕಲೆಯ  ಪ್ರಾರಂಭಿಕ  ಅಭ್ಯಾಸದಲ್ಲಿ  ಕುಶಲತೆಯು  ಶೀಘ್ರ  ಬೆಳವಣಿಗೆಯೊಂದಿಗೆ  ಕಲಾ ಶಿಕ್ಷಣದ  ಮೂಲಕ  ದೊರೆಯಬಲ್ಲದು.
                                ಗೀಚು ಗೆರೆಯಿಂದ  ಚಿತ್ರ
                                ಚಿತ್ರದಿಂದ  ಚಿತ್ರಲಿಪಿ
                                ಚಿತ್ರಲಿಪಿಯಿಂದ  ಚಿತ್ರಕಲೆ
                                ಚಿತ್ರಕಲೆಯಿಂದ   ಸರ್ವ ಜ್ಞಾನಪ್ರಾಪ್ತಿ. 
ಪ್ರತಿ  ಒಂದೊಂದು  ರೇಖೆಯು  ಆಯಾ  ಸಂದರ್ಭಕ್ಕೆ ಅನುಸಾರವಾಗಿ  ತನ್ನದೇ  ಆದ  ಸ್ವರೂಪವನ್ನು  ಬದಲಿಸುವ  ಸಾಮರ್ಥ್ಯವನ್ನು  ಹೊಂದಿದ್ದು  ಕೇವಲ  ಕೆಲವೇ  ರೇಖೆಗಳ  ಜೋಡನೆಗಳ  ಮೂಲಕ  ಬಯಸಿದ  ಯಾವುದೇ  ವಸ್ತುವಿನ  ಸ್ಪಷ್ಟ  ಸ್ವರೂಪವನ್ನು  ಸೂಚಿಸುತ್ತದೆ



 ಉದ್ಯೋಗಕ್ಕಾಗಿ  ಅನ್ಯ  ಅಂತರ  ರಾಷ್ಟ್ರೀಯ  ಆಂಗ್ಲ ಭಾಷೆಯನ್ನು  ಕಲಿಯಲೇ  ಬೇಕಾಗುತ್ತದೆ  ಎಂದಾದಲ್ಲಿ  (ಇಂತಹ  ಒಂದು  ಮಾನಸಿಕ  ಕಲ್ಪನೆಗೆ  ಅವಲಂಬಿತರಾಗುವುದರಿಂದ  ಹಾಗೆಯೇ  ಸರ್ಕಾರದ  ಯಾವುದೇ  ನೀತಿ  ನಿಯಮಗಳು  ಜಾರಿಯಿಲ್ಲದಿದ್ದಲ್ಲಿ) ಮುಂದೊಂದು  ಕಾಲಕ್ಕೆ  ಎಲ್ಲ  ಮಾತೃ  ಭಾಷೆಗಳು  ಕ್ಷೀಣಿಸುತ್ತಾ  ಇಡೀ  ವಿಶ್ವದಲ್ಲೆಲ್ಲ  ಪೂರ್ಣ  ಆಂಗ್ಲ  ಭಾಷೆಯೇ  ಮಾತೃ  ಭಾಷೆಯಾಗಬಹುದಲ್ಲವೇ?  ಮಾತೃಭಾಷೆ, ರಾಜ್ಯಭಾಷೆ, ರಾಷ್ಟ್ರೀಯ ಭಾಷೆ  ಹಾಗು  ಅಂತರ  ರಾಷ್ಟ್ರೀಯ  ಭಾಷೆಗಳು  ಇವುಗಳ  ಸ್ಥಾನಮಾನಗಳನ್ನು  ಗೌರವಾನ್ವಿತವಾಗಿ  ಉಳಿಸಿಕೊಳ್ಳಲು  ಮತ್ತು  ಭಾಷೆಗಳು  ಒಂದಕ್ಕೊಂದು  ಸಮನ್ವಯ  ರೀತಿಯಲ್ಲಿ  ನಡೆದುಕೊಳ್ಳಲು, ಆಯಾ  ರಾಜ್ಯ  ಭಾಷಾ  ಕಲಿಕೆಗೆ  ಪ್ರಥಮ  ಆದ್ಯತೆ  ನಂತರ  ಇತರೆ  ಭಾಷಾವಾರು  ಮೀಸಲಾತಿಯ  ನಿಯಮವನ್ನು  ಜಾರಿಗೊಳಿಸಿ ಸರ್ಕಾರ  ಪಾಲಿಸುತ್ತಾ  ನಡೆದಲ್ಲಿ  ಯಾವ  ಭಾಷೆಗಳು  ಅಳಿಯಲು  ಅವಕಾಶವಾಗದಂತೆ  ಸಾಗಬಲ್ಲವು.

ಶಿಕ್ಷಣದಲ್ಲಿ  ಮೊದಲ  ಆದ್ಯತೆ  ಬದುಕಿನ  ಕುಶಲತೆಗೆ  ಅಂದರೆ  ಚಿತ್ರಕಲೆ, ಜೊತೆಗೆ ಶಾಸ್ತ್ರ ತಾತ್ವಿಕ  ಅಂಶಗಳ, ಸಂಸ್ಕೃತಿಯ  ಮತ್ತು  ಸಾಂಸ್ಕೃತಿಕ  ಹೆಚ್ಚಿನ  ಅಧ್ಯಯನಕ್ಕಾಗಿ  ರಾಜ್ಯಭಾಷಾ  ಕಲಿಕೆ, ನಂತರ  ವ್ಯವಹಾರ  ಭಾಷೆಗೆ  ಆದ್ಯತೆ  ನೀಡಿದಲ್ಲಿ,  ಪ್ರವೃತ್ತಿ, ವೃತ್ತಿ  ಹಾಗು  ಸಂಸ್ಕೃತಿ  ಇವುಗಳ  ಕುಶಲತೆ  ತಾನಾಗಿಯೇ  ಪ್ರತಿ  ವ್ಯಕ್ತಿಗೂ  ಅವರವರ  ಸಾಮರ್ಥ್ಯಕ್ಕೆ  ತಕ್ಕಂತೆ  ಲಭ್ಯವಾಗಬಲ್ಲದು.

ಮುಂದಿನ  ಹಂತ  ಅಂದರೆ  ಮಾತೃ ಭಾಷಾ  ಕಲಿಕೆಗೆ  ಸುಲಭ  ರೂಪದಲ್ಲಿ  ಭಾಷಾ  ಜ್ಞಾನದ  ಪ್ರಾರಂಭಿಕ  ಅಭ್ಯಾಸ, ಚಿತ್ರ  ರಚನಾ  ಸಾಮರ್ಥ್ಯಕ್ಕೆ  ಅನುವಾಗುವಂತೆ  ವಸ್ತುಚಿತ್ರಕ್ಕೆ  ಪ್ರಾರಂಭಿಕ  ಅಭ್ಯಾಸದ  ಮುಂದಿನ  ಹಂತದ  ಘನಾಕೃತಿ  ಹಾಗು  ಪೂರ್ಣ  ವಸ್ತುಚಿತ್ರ  ರಚನಾ  ಅಭ್ಯಾಸದ  ಪ್ರಾರಂಭ, ಹಾಗೆಯೇ  ಈ  ಹಂತದ  ಜೊತೆಗೆ  ಯಾವುದೇ  ಅನ್ಯ  ವ್ಯವಹಾರ  ಭಾಷೆಗಳ  ಪ್ರಾರಂಭಿಕ  ಅಭ್ಯಾಸ, ಅಂತೆಯೇ  ವ್ಯವಹಾರ  ಭಾಷೆಯಲ್ಲಿಯು  ಹೆಚ್ಚು  ಅನ್ಯ  ಅನಾವಶ್ಯಕ  ವಿಷಯಗಳನ್ನು  ಅಳವಡಿಸದೆ  ಕೇವಲ  ವ್ಯವಹಾರ  ಜ್ಞಾನಕ್ಕೆ ತಕ್ಕ  ಅಂಶಗಳನ್ನು  ಅಳವಡಿಸಿಕೊಳ್ಳುತ್ತಾ  ಅಭ್ಯಾಸ   ನಡೆದುಕೊಂಡು  ಹೋದಲ್ಲಿ  ಹಂತ ಹಂತವಾಗಿ  ವ್ಯವಹಾರ  ಭಾಷೆಯನ್ನು  ಕಲಿಯುತ್ತಾ, ಮಾತೃಭಾಷೆ  ಮತ್ತು  ಚಿತ್ರಕಲೆಗೆ  ಪ್ರಾರಂಭಿಕ  ಅಭ್ಯಾಸವು  ಸಹ  ಯಾವುದೇ  ಅನ್ಯ  ಭಾಷೆಯಿಂದ  ಆಗುವ  ಅಡೆತಡೆಗಳಿಲ್ಲದೆ  ಸ್ವರಚನಾ  ಸಾಮರ್ಥ್ಯಕ್ಕೆ  ತಕ್ಕ  ಪುರ್ವಾನುಭವದ  ಅಭ್ಯಾಸ  ಸಾಕಷ್ಟು  ಆಗುವುದರಿಂದಲೂ, ಮಾತೃ ಭಾಷಾ  ಕುಶಲತೆ, ಚಿತ್ರರಚನಾ  ಕುಶಲತೆ  ಹಾಗು  ವ್ಯವಹಾರ  ಭಾಷೆಗಳು  ಸಹ  ಯಾವುದಕ್ಕೂ  ದಕ್ಕೆಯಾಗದೆ  ಸುಗಮವಾಗಿ  ಕಲಿಕೆಯ  ಅಭ್ಯಾಸ   ನಡೆಯಬಲ್ಲದು.


































ಶನಿವಾರ, ನವೆಂಬರ್ 14, 2009

KALIYUGADA KALAAVAMSHI DADA SAHEB PAALKE PRASHASTI VIJETA DR|| RAJ KUMAR



ಕಲಿಯುಗದ  ಕಲಾವಂಶಿ  ಡಾ|| ರಾಜ್ ಕುಮಾರ್  











ಕನ್ನಡ  ಅಕ್ಷರ ಸುಂದರ...
ಭಾಷೆ ಸುಂದರ ...
ನುಡಿ ಸುಂದರ ...
ನಡೆ ಸುಂದರ ... 
ಅರ್ಥವಂತು ಶೀಘ್ರ ಸುಂದರ 
ಎಲ್ಲೇ ಇರು, ಹೇಗೆ ಇರು..
ಎಂದೆಂದಿಗೂ ನೀ ಕನ್ನಡವಾಗಿರು 
ಈ ಕಲಾ ಶಿಕ್ಷಣವು ಮಕ್ಕಳಿಗೆ ಕನ್ನಡ ರಾಜ್ಯೋತ್ಸವ ಮತ್ತು ಮಕ್ಕಳ ದಿನಾಚರಣೆ-೨೦೦೯ ರ ಕೊಡುಗೆ.  


ನನ್ನ  ಅಭ್ಯಾಸ ..............
               ನನ್ನ  ಚಟುವಟಿಕೆ ........
ನನ್ನ  ವೃತ್ತಿ ..................
                ನನ್ನ  ಕರ್ತವ್ಯ ..........
ನನ್ನ  ಗುರಿ ...................
                 ನನ್ನ  ಸಾಧನೆ .........
ನನ್ನ ಜೀವನ
...................
                  ನನ್ನ  ನಡವಳಿಕೆ .......
 ನನ್ನ ಅರೋಗ್ಯ ...................
                   ನನ್ನ  ಮುಂಜಾಗ್ರತ ಕ್ರಮ
    ವ್ಯಕ್ತಿಯು  ತನ್ನ  ಬದುಕಿನಲ್ಲಿ  ನಿತ್ಯ  ಸಾಂದರ್ಭಿಕ  ಸಮಸ್ಯೆಗೆ  ಪರಿಹಾರ  ಕಂಡುಕೊಳ್ಳದೆ, ಸಮಯ  ಮೀರಿದ  ನಂತರ  ಪರಿತಪಿಸುವುದು  ಯೋಚನೆ  (ಚಿಂತೆ ), ಸಮಯಕ್ಕಿಂತ  ಮುಂಚೆಯೇ  ಸಾಂದರ್ಭಿಕ  ಸಮಸ್ಯೆಯ  ಬಗ್ಗೆ  ಅವಶ್ಯ  ಪರಿಹಾರ  ಕಂಡುಕೊಳ್ಳಲು  ವಿಚಾರ  ಮಾಡುವುದು  ಆಲೋಚನೆ, ಆದರೆ ಈ  ಆಲೋಚನೆಯೂ  ಪರಿಪೂರ್ಣತೆಯನ್ನು  ಹೊಂದಿರಬಹುದು  ಇಲ್ಲವೇ  ಹೊಂದುವಲ್ಲಿ  ವಿಫಲವಾಗಿ  ತನ್ನ  ಗುರಿ  ತಲುಪಲು ಈ   ಆಲೋಚನೆಯೂ  ನಿರುಪಯೋಗಿಯಾಗಬಹುದು. ಆದರೆ  ಸಮಯಕ್ಕಿಂತ  ಮುಂಚೆಯೇ  ಸಾಂದರ್ಭಿಕ  ಸಮಸ್ಯೆಯ  ಬಗ್ಗೆ  ಪರಿಹಾರ  ಕಂಡುಕೊಳ್ಳುವುದರ  ಜೊತೆಗೆ, ಕಂಡುಕೊಂಡ  ಪರಿಹಾರದಿಂದ  ಮುಂದೆ  ಆಗುವ  ಪರಿಣಾಮ, ದುಷ್ಪರಿಣಾಮದ  ಬಗ್ಗೆಯೂ  ವಿಚಾರ  ಮಾಡಿ  ತನ್ನ  ವ್ಯಕ್ತಿತ್ವವನ್ನೇ  ಪರಿವರ್ತಿಸಿಕೊಳ್ಳಲು  ನಡೆಸುವ  ಪ್ರಯತ್ನವೇ  ಚಿಂತನೆ. ಆದರೆ  ಚಿಂತೆಯಿಂದ     ಚಿತೆಯಾಗುವುದಕ್ಕಿಂತ  ಮುಂಚೆಯೇ  ಚಿಂತನೆಯಿಂದ  ಉತ್ತಮ  ಚಿತ್ತಾರದ  ಬದುಕಿನತ್ತ  ಸಾಗುವುದು  ಲೇಸು. ಆದರೆ  ಈ  ಪದಗಳು  ಬದುಕಿನ  ಅನೇಕ  ಸಂದರ್ಭಲ್ಲಿ  ಒಂದು  ನಿರ್ಧಿಷ್ಟ  ಅರ್ಥದಲ್ಲಿ  ಬಳಕೆಯಾಗುತ್ತಿಲ್ಲ.

    ಆತುರದ  ಮನಸ್ಸು  ತನ್ನ  ಯಾವುದೇ  ಕೆಲಸ  ಕಾರ್ಯಗಳಲ್ಲಿ  ಆಸಕ್ತಿ   ಹೊಂದಿದ್ದರೂ, ಆ  ಆಸಕ್ತಿಯಲ್ಲಿ  ತಾನು  ಮಾಡುತ್ತಿರುವ  ಕೆಲಸದ  ಪರಿಣಾಮದ  ಬಗ್ಗೆ  ತನ್ನ  ಮನಸ್ಸನ್ನು  ಹರಿಬಿಡದೆ, ತಾನು  ಮಾಡುತ್ತಿರುವ  ಕೆಲಸವೇ  ಸರಿ, ತನ್ನ  ಆಲೋಚನೆಯೇ  ಸರಿ, ತನ್ನ  ನಿರ್ಧಾರವೇ  ಸರಿ  ಎಂದು  ಮಾನಸಿಕವಾಗಿ  ಹಿಗ್ಗುತ್ತಾ  ತನ್ನ  ಕೆಲಸದ  ಬಗ್ಗೆ  ಮಾತ್ರ  ಗಮನವಿರಿಸುವುದು  ಮತ್ತು  ತಾನು  ಮಾಡಿದ  ಕೆಲಸ  ಪೂರ್ಣಗೊಂಡಿತೆಂದು  ತನ್ನಷ್ಟಕ್ಕೆ  ತಾನೆ  ತೃಪ್ತಿ ಪಡುವುದು ಇದು  ಅನೇಕ  ವ್ಯಕ್ತಿಗಳ  ದೈನಂದಿನ  ಕೆಲಸಗಳಲ್ಲಿ  ಆಗುವ  ಅನುಭವ, ಅಂದರೆ  ಈ  ಅನುಭವವು  ಯಾವುದೇ  ವೃತ್ತಿ, ಉದ್ಯಮಿ, ರಾಜಕಾರಣಿ, ಅಥವಾ  ಕಾರ್ಮಿಕ, ಅಧ್ಯಾಪಕ, ರೈತ  ಇಲ್ಲವೇ  ಗೃಹ ಕೆಲಸದವರಾಗಿರಬಹುದು  ಅಥವಾ  ಚಲನಚಿತ್ರ, ದೂರದರ್ಶನ  ಪ್ರಸಾರ, ಪತ್ರಿಕಾ  ಮಾಧ್ಯಮ ಇತ್ಯಾದಿ  ಯಾವುದೇ  ಕ್ಷೇತ್ರದಲ್ಲಿ  ಕರ್ತವ್ಯ  ನಿರ್ವಹಿಸುವ  ವ್ಯಕ್ತಿಗೂ  ಹೊರತಲ್ಲ. ಇಂತಹ  ಒಂದು  ಆತುರದ  ನಿರ್ಧಾರದಿಂದ  ತಾನು  ಮಾಡುತ್ತಿರುವ  ಕರ್ತವ್ಯದ  ಪರಿಣಾಮದಿಂದ  ವಿನಾಶ  ಇಲ್ಲವೇ  ದುಷ್ಪರಿಣಾಮ ಬೀರಬಹುದು  ಹಾಗೆಯೆ  ಇದೇ  ಚಿಂತೆಗೆ  ಗುರಿಯಾಗಬಲ್ಲದು.

    ಆದರೆ  ಮಕ್ಕಳಿಗೆ  ಈಗಿನ  ಶಿಕ್ಷಣ  ಕ್ಷೇತ್ರಕ್ಕಿಂತಲೂ   ಮಾಧ್ಯಮಗಳನ್ನು  ಅನುಕರಿಸುವ  ಮೂಲಕ  ಹೆಚ್ಚಿನ  ಜ್ಞಾನ  ಅಭಿವೃದ್ಧಿಯನ್ನು  ಸುಲಭ  ರೂಪದಲ್ಲಿ  ಪಡೆಯಲು  ಪತ್ರಿಕೆಗಳು, ಆಕಾಶವಾಣಿ, ದೂರದರ್ಶನ  ಇತ್ಯಾದಿ  ಇವು  ಅನುಕೂಲಕರ  ವ್ಯವಸ್ಥೆಯಂತೆ  ಸೃಷ್ಟಿಯಾಗಿದ್ದರೂ, ಇವುಗಳಲ್ಲಿಯ  ಕೆಲವು  ಮಾಧ್ಯಮ  ವಿಭಾಗಗಳ  ಕೀಳುಮಟ್ಟದ  ಮನರಂಜನೆಯ  ಪ್ರಸಾರದಿಂದ  ಅಲ್ಲದೆ  ಕೀಳು  ಮಟ್ಟದ  ಚಲನಚಿತ್ರಗಳ  ಮನರಂಜನೆಗಳು  ಅನುಕರಣೆಯಾಗಿ  ವಿಧ್ಯಾರ್ಥಿಗಳನ್ನು  ಪ್ರೆಮಾರ್ಥಿಗಳನ್ನಾಗಿ  ರೂಪಿಸಲು  ಕಾರಣವಾಗುತ್ತಿರುವುದು  ವಿಪರ್ಯಾಸವೇ  ಸರಿ. ಇವು  ಕೇವಲ  ಸುದ್ಧಿ  ಮತ್ತು  ಮನರಂಜನೆಯಾಗಿರದೆ  ಮನಃ ಪೂರ್ವಕವಾಗಿ  ಮಾನಿತ  ಅಭಿರುಚಿಯನ್ನು  ತರುವಂತಹ  ಪ್ರಸಾರದಿಂದ  ಎಲ್ಲ  ಮಾಧ್ಯಮಗಳು  ಕೂಡ  'ಕಲಾಶಿಕ್ಷಣ' ದ  ರೂಪದಂತೆ  ಶೈಕ್ಷಣಿಕ  ಕ್ಷೇತ್ರದ  ಒಂದು  ಅಂಗದಂತೆಯೂ  ಆಗಬಹುದಾಗಿದೆ. ಇಂಥಹ  ಪ್ರಯತ್ನದತ್ತ  ಸಾಗುತ್ತಿರುವ  ಒಂದೇ  ಒಂದು  ಪತ್ರಿಕೆ ಎಂದರೆ  ಅದು  'ವಿಜಯ  ಕರ್ನಾಟಕ' ಎಂದರೆ  ತಪ್ಪಾಗಲಾರದು .

    ಕಲೆ  ಮನ  ಪರಿವರ್ತಿಸುವ  ಪ್ರಕ್ರಿಯೆ, ಪರಿವರ್ತಿಸುವ  ಕ್ರಿಯೆ  ಪರಿಪೂರ್ಣತೆಯಿಂದ ಕೂಡಿರಬೇಕು, ವ್ಯಕ್ತಿಯ  ಭಾವನ  ರೂಪಕ್ಕೆ  ಒಂದು  ನೆಲೆಯಿಲ್ಲ, ಮಿತಿಯಿಲ್ಲ, ಪರಿಪೂರ್ಣತೆಯ  ಸ್ವರೂಪವು  ಇಲ್ಲ, ಮನಸ್ಸು  ಹಲವು  ವಿಚಾರ  ರೂಪದಲ್ಲಿ  ಸಂಚರಿಸಿ, ಚಿಂತನೆಯ   ಮೂಲಕ  ಒಂದು  ಚತುರ ಕ್ರಿಯೆಯನ್ನು  ನಡೆಸುವ  ಸಮೂಹ  ರೂಪ. ಚತುರ  ಕ್ರಿಯೆಗಳಿಂದ  ಸೃಷ್ಟಿಸಲ್ಪಡುವ  ಯಾವುದೇ  ಕಲಾಕೃತಿಗಳು  ಪ್ರವೃತ್ತಿ  (ಅನಂದಕ್ಕಾಗಿ) ಯಾಗಿರಬಹುದು. ವೃತ್ತಿ  (ಅನುಕೂಲಕ್ಕಾಗಿ) ಯಾಗಿರಬಹುದು, ಸಂಸ್ಕೃತಿ  (ಆಚರಣೆಗಾಗಿ) ಯಾಗಿರಬಹುದು  ಇಲ್ಲವೇ  ಇವು  ಮೂರೂ  ಕ್ರಿಯಾ  ವಿಧಾನಗಳ  ಸಂಯೋಜನೆಯೊಂದಿಗೆ  ಒಂದು  ಪರಿಪೂರ್ಣ  ಕಲಾಕೃತಿಯಾಗಿ  ಸೃಷ್ಟಿಯಗಿರಬಹುದು. ಹೀಗೆ  ಸೃಷ್ಟಿಯಾದ  ಕಲಾಕೃತಿಯೇ  ಪ್ರತಿ  ವ್ಯಕ್ತಿಯನ್ನು  ಮೆಚ್ಚುಗೆಯೊಂದಿಗೆ  ಗೆಲ್ಲಬಹುದು. ಸದಾಕಾಲ  ಗೌರವಾನ್ವಿತವಾಗಿ   ಅಚ್ಚಳಿಯದೆ  ಎಲ್ಲರ  ಮನಸ್ಸಿನಲ್ಲಿ  ಉಳಿಯಲು  ಸಾಧ್ಯ. ಆದ್ದರಿಂದಲೇ  ಕನ್ನಡ  ಚಲನಚಿತ್ರದಲ್ಲಿ  ಇಂತಹ  ಕಲಾ  ಸಾಮರ್ಥ್ಯದ  ಪ್ರದರ್ಶನದಿಂದಲೇ  ಡಾ|| ರಾಜ್ ಕುಮಾರ್  ರವರು  ಎಲ್ಲರ  ಮನಸ್ಸನ್ನು  ಗೆಲ್ಲುವ  ಮೂಲಕ  ಚಿರನೆನಪಾಗಿ  ಉಳಿಯಲು  ಸಾಧ್ಯವಾಗಿದೆ. ಅವರ  ಯಾವುದೇ  ಪಾತ್ರಗಳಲ್ಲಿ  ಸ್ವಯಂಕೃತ  ಆತ್ಮವಿಶ್ವಾಸದಿಂದಲೇ  ನೈಜತೆಯನ್ನು  ತುಂಬುವ  ಮೂಲಕ  ನಡೆ, ನುಡಿಗಳಿಂದ  ಮನಸ್ಸಿಗೆ  ಆಸಕ್ತಿ, ಉತ್ಸಾಹ  ತರುವಂತೆ, ಉತ್ತಮ  ಗುಣಮಟ್ಟದ  ಜೀವನದ  ಬಗ್ಗೆ  ಸೃಜನಶೀಲತೆಯು  ಬೆಳೆಯುವಂತೆ, ಕ್ಷಣಕ್ಷಣಕ್ಕೂ  ತಮಗೆ  ಸಾಂದರ್ಭಿಕ  ಸಮಸ್ಯೆಗಳನ್ನು  ತಂದ  ಎದುರಾಳಿಗಳಿಗೆ  ನೀತಿ ಸಂಹಿತೆಯ  ಮೌಲ್ಯಗಳನ್ನು  ತತ್ ಕ್ಷಣದಲ್ಲಿಯೇ  ಎದುರೇಟಾಗಿ  ನೀಡುತ್ತ  ಸದಾ  ಪ್ರೇಕ್ಷಕರನ್ನು  ತೃಪ್ತಿಶೀಲರನ್ನಾಗಿ  ಮಾರ್ಪಡಿಸುತ್ತ, ಅವರನ್ನು  ಸಜ್ಜನತೆಯ  ಮನೋ ಅಭಿವೃದ್ಧಿಯೊಂದಿಗೆ   ಮನಪರಿವರ್ಥಿಸುವ  ಮೂಲಕ  ಸಂಸ್ಕೃತಿಯನ್ನು  ಬೆಳೆಸುವಲ್ಲಿಯೂ  ಕಾರಣರಾಗಿ  ಕನ್ನಡದ  ಉತ್ತಮ  ಶ್ರೇಷ್ಠ  ಗೌರವಾನ್ವಿತ  ಕಲಾವಂತರಾಗಿದ್ದರಿಂದಲೇ  ಅವರ  ಕಲಾತ್ಮಕ  ಕ್ರಿಯೆ  ಹಚ್ಚಹಸುರಗಿಯೇ  ನೆನಪಲ್ಲಿ ಉಳಿಯುತ್ತಿದೆ. ಇಂತಹ  ಅವರ  ಕಲಾತ್ಮಕ  ಕ್ರಿಯೆಯಲ್ಲಿ  ಅವರ  ಪಾತ್ರದ  ಬಗ್ಗೆ  ತಮ್ಮ  ಚತುರತೆಯು  ಸ್ಪಷ್ಟ  ಪರಿಪೂರ್ಣತೆಯ  ಚಿಂತನೆಯಿಂದ   ಕೂಡಿರುತ್ತದೆ. ಅಂದರೆ  ತಮಗೆ  ದೊರಕಿದ  ಪಾತ್ರವು  ಯಾವುದು, ಎಂತಹದು  ಎನ್ನುವ  ಬಗ್ಗೆ  ವೈಜ್ಞಾನಿಕ  ಮನೋಭಾವನೆ. ಅ  ಪಾತ್ರವನ್ನು  ತಮ್ಮದೇ  ಅದ  ಶೈಲಿಯ  ಅಭಿನಯಕ್ಕೆ  ತಯಾರಿ  ಮಾಡಿಕೊಳ್ಳುವ  ಬಗ್ಗೆ  ಕಾಲ್ಪನಿಕವಾಗಿ  ಸಾಂದರ್ಭಿಕ  ಭಾವನೆಗಳ  ಆಕಾರ, ರೂಪಗಳ  ಸಿದ್ಧತೆಯ  ತಂತ್ರಜ್ಞಾನ, ಈ  ಎರಡು  ಕ್ರಮಬದ್ಧ  ಹಂತಗಳನ್ನು  ಪರಿಪಕ್ವಗೊಳಿಸುವುದರಿಂದ   ತಮ್ಮ  ಕೊನೆಯ  ಹಂತದಲ್ಲಿ  ಪ್ರಾಯೋಗಿಕವಾಗಿ  ಪಾತ್ರದ  ಪರಿವರ್ತಿತ  ಅಭಿನಯವನ್ನು  ಪ್ರದರ್ಶಿಸುವ  ಚತುರತೆ  ಅಂದರೆ  ಕಲೆ  (ಚಿಂತನೆ) ಗಾರಿಕೆ  ಅವರದಾಗಿತ್ತು. ಅಂದರೆ  ಇಲ್ಲಿ  ಅವರ  ಪಾತ್ರದ  ಬಗ್ಗೆ  ನೀಡಿರುವ  ವಿವರಣೆಯು  ಒಂದು  ಕಲಾಕೃತಿ  ಸಿದ್ಧತೆಗೆ  ಅವಶ್ಯ  ತಾತ್ವಿಕ  ಅಂಶ ಗಳು  ಯಾವುವು   ಮತ್ತು  ಅವುಗಳ  ಕಾರ್ಯವೈಖರಿಯ  ಬಗ್ಗೆ  ಅರ್ಥೈಸಿಕೊಳ್ಳಲು  ಇದು  ಆಸಕ್ತಿಯ  ಒಂದು  ಸುಲಭ  ವಿಧಾನದ  ಉದಾಹರಣೆಯಾಗಬಲ್ಲದು  ಎಂದುಕೊಂಡಿದ್ದೇನೆ., ಹಾಗೆಯೆ  ಅವರ  ಯಶಸ್ಸಿಗೆ, ಆ  ಸಂದರ್ಭಗಳಿಗೆ  ತಕ್ಕ  ಕನ್ನಡ  ಚಲನಚಿತ್ರದ ಇತರ  ಎಲ್ಲ  ಸಹಾಯಕ  ಮತ್ತು  ತಾಂತ್ರಿಕ  ಹಿನ್ನೆಲೆಯೂ   ಅಷ್ಟೇ  ಸಾಮರ್ಥ್ಯ ಉಳ್ಳವು     ಎಂಬುದು  ಸಹ  ಅಷ್ಟೇ  ಸತ್ಯ. ಇಂತಹ  ಕಲಾತ್ಮಕ  ಸಮೂಹ  ಕಲಾವಿದರಿಂದ  ರೂಪುಗೊಂಡ  ಕಲಾತ್ಮಕತೆ  ಹಾಗು  ಕನ್ನಡ  ಚಲನಚಿತ್ರದ  ಸದಾ  ಸೂರ್ಯ, ಚಂದ್ರರಂತೆ   ಕ್ಷಣಕ್ಷಣಕ್ಕೂ  ಬೆಳಕನ್ನು  ನೀಡುವ  ಮೂಲಕ  ಚಿರಸ್ಥಾಯಿಯಾಗಿ  ಉಳಿಯುವುವು.

    ಆದರೆ  ಅಶ್ಲೀಲತೆಯಿಂದ   ಕೂಡಿದ  ನಂತರದ  (ಅಶ್ಲೀಲತೆಯನ್ನು  ಆಕರ್ಶಿಸುವ    ಕೇವಲ  ಕೆಲವರನ್ನೇ  ದೃಷ್ಟಿಯಾಗಿಟ್ಟುಕೊಂಡು  ನಿರ್ಮಾಣಗೊಳ್ಳುತ್ತಿರುವ) ಈ   ಚಲನಚಿತ್ರಗಳು  ಮತ್ತು  ಕಿರುತೆರೆಯ  ಧಾರವಾಹಿಗಳಲ್ಲಿ  ದುಷ್ಟ  ಶಕ್ತಿಗಳೇ  ಚತುರತೆ ಉಳ್ಳವರು, ಸಜ್ಜನತೆ ಉಳ್ಳವರೆಲ್ಲರು  ಬುದ್ಧಿಹೀನರು, ಪ್ರೇಕ್ಷಕರಿಗೆ  ಪುಳಕಗೊಳಿಸುವ  ನೆಪದಲ್ಲಿ  ಒಳ್ಳೆಯ  ಗುಣಕ್ಕೆ  ಹಿಂಸೆ  ತೋರಿಸಲು  ದುಷ್ಟ  ಶಕ್ತಿಗಳನ್ನೇ  ಹೆಚ್ಚು  ತಂತ್ರಜ್ಞಾನಿಗಳನ್ನಾಗಿ  ಮಾಡುವ  ಮೂಲಕ  ಅವರದೇ  ಮೇಲುಗೈ  ಎಂಬಂತೆ  ಪಾತ್ರಗಳನ್ನು  ಸೃಷ್ಟಿಸುವ  ಮೂಲಕ, ಕಿರುತೆರೆಯ  ಧಾರವಾಹಿಗಳು  ಕೇವಲ  ಚಿತ್ರದ  ಅಂತ್ಯದಲ್ಲಿ  ಮಾತ್ರ  ಸಜ್ಜನತೆಗೆ  ಗೆಲುವನ್ನು  ತೋರಿಸುವ  ಹೊತ್ತಿಗೆ, ಚಿತ್ರದಲ್ಲಿ  ಸದಾ  ದುರ್ನಡತೆಗೆ  ಗೆಲುವನ್ನು  ಕಂಡು, ಆಸಕ್ತಗೊಂಡು, ಮಾನಸಿಕವಾಗಿ  ಅನುಕರಣೆಗೊಂಡು  ಧೀರ್ಘ  ಧಾರವಾಹಿಗಳು  ಮುಗಿಯುವ  ಹೊತ್ತಿಗೆ  ಅನೇಕ  ದುಷ್ಟ  ಶಕ್ತಿಗಳೇ  ಸೃಷ್ಟಿಯಾಗಲು  ಸುಲಭ   ಅವಕಾಶವಾಗುತ್ತಿದೆ. ಹಾಗೆಯೆ  ಭಾವನೆಗಳನ್ನು  ಪ್ರದರ್ಶಿಸುವಲ್ಲಿಯೂ  ಭಾವನೆಗಳ  ಸುತ್ತಾಟಕ್ಕೆ  ಸ್ಥಿತಿ  ಪ್ರಜ್ಞೆಯೇ  ಕಾರಣ, ಆದರೆ  ಈ   ಸ್ಥಿತಿ ಪ್ರಜ್ಞೆಯ  ಕೊರತೆಯನ್ನೂ  ಸಹ  ಸಜ್ಜನತೆಯ  ಪಾತ್ರಗಳಿಗೆ  ಮೀಸಲು  ಎಂಬಂತೆ   ಸೃಷ್ಟಿಸುತ್ತ  ಹೋಗುವುದು  ಕೇವಲ  ಧೀರ್ಘ  ಧಾರವಾಹಿ ಗಳಾಗಿ  ಮುಂದುವರೆಸುವ  ಪ್ರಯತ್ನಕ್ಕೆ  ಕಾರಣವಾಗಬಲ್ಲದೇ  ವಿನಃ  ಉತ್ತಮ  ಪರಿಣಾಮ  ಬೀರಲಾರದು. ದುಷ್ಕೃತ್ಯದ  ಮೂಲಕವೇ  ತಮ್ಮ  ಸಾಧನೆಗಳನ್ನು  ಸಾಧಿಸಲು  ಹೆಚ್ಚು  ಅವಕಾಶವಾಗುತ್ತದೆ  ಎಂದೆನಿಸಿ, ಇದು  ವ್ಯಕ್ತಿಗೆ  ಅನುಕೂಲ  ರೂಪದಲ್ಲಿ  ಅನುಕರಣೆಯೇ  ಆಗುತ್ತದೆಯೇ  ವಿನಃ, ಪರಿಣಾಮದ  ಬಗ್ಗೆ  ಕಲಾತ್ಮಕವಾಗಿ  ಚಿಂತನೆ  ಮಾಡುವ  ಬದಲಾಗಿ  ಶಿಕ್ಷಣದಲ್ಲಿ, ಪರಿಸರದಲ್ಲಿ  ಆಗುವ  ಅನುಕರಣೆಯ  ಅನುಭವವೇ  ಇಲ್ಲಿಯೂ  ಪರಿಣಮಿಸುವುದು. ಜಾಹಿರಾತುಗಳ  ಅಶ್ಲೀಲತೆಯ  ಪ್ರದರ್ಶನಕ್ಕೆ  ಮಿತಿಯಿಲ್ಲ  ಇಷ್ಟೇ  ಸಾಲದು  ಎಂಬಂತೆ  ಅನೈತಿಕ  ಸಂಬಂಧದಿಂದ  ಉಂಟಾಗುವ  ಎಡ್ಸ್  ರೋಗದ  ನೆಪದಲ್ಲಿ  ಲೈಂಗಿಕ  ಶಿಕ್ಷಣವು  ಸಹ  ಈಗ  ಪವಿತ್ರವಾದ   ಶಿಕ್ಷಣ ಕ್ಷೇತ್ರಕ್ಕೂ  ಕಾಲಿಡುತ್ತಿದೆ. ಒಂದು  ಸಮಸ್ಯೆಯ  ಪರಿಹಾರಕ್ಕೆ, ಈ  ಸಮಸ್ಯೆಯ  ಸೃಷ್ಟಿಯ  ಮೂಲವೇ  ಕಾರಣ  ಹೊರತು  ದುಷ್ಪರಿಣಾಮ  ಬೀರುವ  ಮತ್ತೊಂದು  ಸಮಸ್ಯೆಯನ್ನು  ತಂದು ಒಡ್ಡುವುದರಿಂದ  ಸಮಸ್ಯೆಯ  ಸರಪಳಿಯೇ  ಬೆಳೆಯುತ್ತದೆ  ವಿನಃ  ಸಮಸ್ಯೆ  ಪರಿಹಾರವಾಗದು. ವ್ಯಕ್ತಿಯ  ಮೇಲೆ  ಮಾನಸಿಕವಾಗಿ  ತೀವ್ರ  ದುಷ್ಪರಿಣಾಮ  ಬೀರುವುದು, ಅಂದರೆ  ಮನರಂಜನೆಯ  ನೆಪದ  ಮೂಲಕ  ಅತಿಯಾದ  ಅನಾವಶ್ಯಕ  ಅಶ್ಲೀಲ  ದೃಶ್ಯಗಳಿರುವ  ಮನರಂಜನಾ  ಕ್ಷೇತ್ರದಲ್ಲಿಯ  ಈ  ದೃಶ್ಯಗಳ  ಆಸಕ್ತಿಯುಳ್ಳವರು, ನರ ದೌರ್ಬಲ್ಯ  ಉಳ್ಳವರು, ಅನುಕರಣೀಯ  ಸ್ವಭಾವದವರು  ಇಂತಹವರಿಗೆ  ಇಂತಹ  ದೃಶ್ಯಗಳಿಂದ  ಪ್ರಚೋದನೆ  ನೀಡಿದಂತಾಗಿ  ಅನೈತಿಕ  ಸಂಬಂಧಕ್ಕೆ   ಕಾರಣ ವಾಗದಿರಲಾರವೇ? ಹೀಗೆ  ಇಂತಹ  ಸಮಸ್ಯೆಯ  ಸೃಷ್ಟಿಗೆ  ಇರುವ  ಮೂಲ  ಸ್ಥಳದಲ್ಲಿಯೇ  ನಿರ್ಬಂಧದ  ಕಟ್ಟುಪಾಡುಗಳಿದ್ದು  ತಾನೆ  ತಾನಾಗಿ  ನಿರ್ಮೂಲನೆಗೆ  ಅವಕಾಶವಿರುವಾಗ, ಪವಿತ್ರವಾದ  ಶಿಕ್ಷಣ  ಕ್ಷೇತ್ರವು  ತನ್ನ  ಪಾವಿತ್ರತೆಯನ್ನು  ಕಳೆದುಕೊಳ್ಳುವುದಲ್ಲದೆ, ಮನರಂಜನಾ  ಕ್ಷೇತ್ರಕ್ಕೆ  ಇನ್ನಷ್ಟು  ಮುಂದುವರಿಯಲು  ಅವಕಾಶ   ನೀಡಿದಂತಾಗುವುದಿಲ್ಲವೇ ?

    ಅಂದು  ಅನಾಗರಿಕ  ಎಂದೆನಿಸಿಕೊಂಡ  ಆದಿಮಾನವನು  ಮನಕ್ಕಾಗಿ  ಹಂತಹಂತವಾಗಿ  ಪ್ರಕೃತಿ  ವಸ್ತು, ಬಟ್ಟೆ  ನಂತರ  ಉಡುಪುಗಳನ್ನು  ಕಂಡುಕೊಂಡು  ಧರಿಸಿಕೊಳ್ಳುವ  ಮೂಲಕ  ಉತ್ತಮ  ನಾಗರೀಕನೆನಿಸಿಕೊಳ್ಳುತ್ತಿದ್ದಂತೆಯೇ, ಈಗ  ಮತ್ತೆ  ನವೀನತೆಯ  ನೆಪದಲ್ಲಿ  ಹಿಂದಿನ  ಸ್ಥಿತಿಗೆ  ಹಿಂತಿರುಗುತ್ತಿರುವುದು, ಇದರಲ್ಲಿ  ಮಾನಸಿಕವಾಗಿಯೂ, ನೈತಿಕವಾಗಿಯೂ  ನಾಗರೀಕತೆಯ  ಮೌಲ್ಯತೆಯು ಯಾರಿಗೆ  ಸಲ್ಲಬಹುದು? ಇಂತಹ  ಸಾಂದರ್ಭಿಕ  ಸ್ಥಿತಿಗಳು  ಅನುಕರಣೆಯಾಗುತ್ತ  ಹೋಗುವುದು  ನಾಗರೀಕತೆಯ  ಬೆಳವಣಿಗೆಯೇ? ಕಲೆ, ಎಂದಿಗೂ  ಶೀಲವಂತಿಗೆಯಿಂದ  ಸೃಷ್ಟಿಯಾದರೆ  ಮಾತ್ರ  ಪ್ರತಿ  ವ್ಯಕ್ತಿಯ  ಭಾವನೆಗಳಿಗೆ  ಸ್ಪಂಧಿಸುತ್ತದೆ ಇಲ್ಲವಾದಲ್ಲಿ  ನಕ್ಷತ್ರದಂತೆ  ಮಿಂಚಿ  ಮಾಯವಾಗಬಲ್ಲದು, ಅಥವಾ  ಆಸಕ್ತಿಯ  ಭಾವನೆಗಳಿಗೆ  ಸ್ಪಂಧಿಸಿ  ಅನುಕರಣೆಯಾಗಬಲ್ಲದು. ಸಂಸ್ಕೃತಿಯ  ಉತ್ತಮ  ಬೆಳವಣಿಗೆ  ಮನಪರಿವರ್ತಿಸುವ  ಸಾಮರ್ಥ್ಯವನ್ನು  ಬೆಳೆಸಿಕೊಳ್ಳಲು  ಅನುಕೂಲವಿರುವ  ಚಲನಚಿತ್ರ  ಹಾಗು  ಕಿರುತೆರೆಗಳಿಗೂ  ಮತ್ತು  ಮಾನವ  ನಿರ್ಮಿತ  ವಸ್ತುಗಳ  ವಿನ್ಯಾಸದಲ್ಲಿ  ಪರಿವರ್ತನೆಯ  ಸಾಮರ್ಥ್ಯವು  ಮಂದಗತಿಯಲ್ಲಿ  ಸಾಗುತ್ತಿರುವ  ಬದುಕಿನ  ಕಲೆಗೂ  ಬಹುಶಃ  ಉತ್ತಮ  ಗುಣಮಟ್ಟದ  ಚಿಂತನಾ  ಸಾಮರ್ಥ್ಯದ  ಕೊರತೆಯೇ  ಕಾರಣವಾಗಿರಬಹುದು. ಆದರೆ  ಇಲ್ಲಿ  ಸಂಸ್ಕೃತಿ  ಮತ್ತು  ವೃತ್ತಿ  ಇವು  ವಂಚಿತಗೊಂಡಿದ್ದರು, ಚಿಕ್ಕಮಕ್ಕಳಿಗೆ  ಸಂಗೀತ, ಸಾಹಿತ್ಯ, ನೃತ್ಯ  ವಿವಿಧ  ರೀತಿಯ  ಗಾಯನಗಳಿಗೆ  ದೂರದರ್ಶನಲ್ಲಿ  ಈಚೆಗೆ  ಹೆಚ್ಚು  ಅವಕಾಶ  ನೀಡುವ  ಮೂಲಕ  ಪ್ರವೃತ್ತಿಯ  ಉತ್ತಮ  ಬೆಳವಣಿಗೆಗೆ  ಮಾತ್ರ  ಕಾರಣವಾಗುತ್ತಿರುವುದು  ವೀಕ್ಷಕರಿಗೆ  ಸ್ವಲ್ಪಮಟ್ಟಿಗೆ  ನೆಮ್ಮದಿಯ  ನಿಟ್ಟುಸಿರು  ಬಿಡಲು  ಅವಕಾಶವಾದಂತಾಗಿದೆ  ಎನ್ನುವಷ್ಟರಲ್ಲೇ  ಈ   ಪ್ರವೃತ್ತಿಯಲ್ಲಿಯೂ  ಅಶ್ಲೀಲತೆಯು  ಮೆರೆಯುತ್ತಿರುವುದು          ಖೆದವೆನಿಸುತ್ತಿದೆ. ಇಚೆಗೆ  ಪ್ರಸಾರವಾದ, ಪ್ರಸಾರವಾಗುತ್ತಿರುವ  ಕೇವಲ  ಕನಿಷ್ಠ  ಸಂಖ್ಯೆಯ  ಬೆರಳೆಣಿಕೆಯಷ್ಟು  ಉತ್ತಮ  ಗುಣಮಟ್ಟದ  ಧಾರವಾಹಿಗಳು  ಬಂದರೆ  ಸಾಲದು, ಉತ್ತಮ  ಗುಣಮಟ್ಟದ  ಮೂಲಕ  ಎಲ್ಲ  ಧಾರವಾಹಿಗಳು  ನಿರ್ಮಾಣಗೊಂಡು  ಸ್ಪರ್ಧಾತ್ಮಕ  ವ್ಯವಸ್ಥೆಯಲ್ಲಿ  ಪ್ರಸಾರವಾದರೆ  ಮಾತ್ರ  ಮನಪರಿವರ್ತನೆಯ  ಮೂಲಕ  ಸಂಸ್ಕೃತಿಯ  ಉತ್ತಮ  ಬೆಳವಣಿಗೆಯಾಗಲು ಸಾಧ್ಯವಾಗಬಲ್ಲದು.

        ಒಮ್ಮೆ  ಹಿಂದಿನ  ನೆನಪಿನತ್ತ  ಗಮನಿಸಿ, ಅಂದರೆ -

    ಆಗ - ಡಾ|| ರಾಜ್  ಕುಮಾರ್  ರವರು  ಅಭಿನಯಿಸಿದ  ಎಲ್ಲ  ಕನ್ನಡ ಚಲನಚಿತ್ರಗಳು  ಸದಭಿರುಚಿ  ಮತ್ತು  ಸದ್ಭಾವನೆಗಳಿಗೆ ಸ್ಪಂದಿಸುವಂತವುಗಳಾಗಿದ್ದವು.

    ಈಗ - ನಂತರದ  ಅವಧಿಯಲ್ಲಿ  ನಿರ್ಮಾಣಗೊಳ್ಳುತ್ತಿರುವ  ಚಲನಚಿತ್ರಗಳು  ಪಾವಿತ್ರತೆಗೆ  ಎಲ್ಲಿಯೂ  ಕಿಂಚಿತ್ತು  ಅಂತರವು  ಇಲ್ಲದೆ  ಅವಕಾಶವೇ ಇರದ ಚಿತ್ರಗಳು.

    ಆಗ - ಶೀಲವಂತಿಕೆಗೆ  ಗೌರವ  ಕೊಡುತ್ತಾ, ನಿಷ್ಠೆಯೇ  ಆವೃತ್ತಗೊಂಡ  ಹಾಗು  ಶಿಷ್ಟ  ಸಾಹಸಿಗಳದೇ   ಪ್ರಧಾನವಾದ  ಚಿತ್ರಗಳು ಆಗಿರುತ್ತಿದ್ದವು

    ಈಗ - ಕೇವಲ  ಅಶ್ಲೀಲತೆಯೇ  ಕೇಂದ್ರಬಿಂದು  ಮತ್ತು
ಆವೃತ್ತಗೊಂಡ  ಹಾಗು  ದುಷ್ಟ  ಸಾಹಸಿಗಳದೇ   ಪ್ರಧಾನವಗಿರುವಂತಹುಗಳಗಿವೆ.

    ಆಗ - ಆಗಿನ  ಕನ್ನಡ  ಚಲನಚಿತ್ರಗಳು  ಪ್ರೇಕ್ಷಕರ  ಮೇಲೆ  ಒಳ್ಳೆಯ  ಪರಿಣಾಮ  ಬೀರುತ್ತಿದ್ದವು  ಹಾಗು  ಉತ್ತಮ  ಮನಪರಿವರ್ತನೆಗೊಳಿಸುತ್ತಿದ್ದವು

    ಈಗ - ಈಗಿನ  ಚಲನಚಿತ್ರಗಳು  ಪ್ರೇಕ್ಷಕರ  ಮೇಲೆ
ದುಷ್ಪರಿಣಾಮ ಬಿರಿ  ಅನುಕರಣೆಯಿಂದ  ಮಾನಿತ  ಮನಸ್ಸನ್ನು  ಕ್ಷೀಣಗೊಳಿಸುತ್ತಿವೆ   


ಅದಕ್ಕೆಂದೇ  ಅಲ್ಲವೇ  ಅಂದು  ಡಾ|| ರಾಜ್ ಕುಮಾರ್  ಅಭಿನಯದ  ಚಲನಚಿತ್ರಗಳ  ಅವಧಿಯಲ್ಲಿ  ಏರುತ್ತಿದ್ದ  ಚಲನಚಿತ್ರ ಮಂದಿರಗಳ  ಸಂಖ್ಯೆ  ಈಗ  ನಷ್ಟದಿಂದ  ಅಲ್ಲದೆ  ಪಾಪದ  ಪ್ರಾಯಶ್ಚಿತ್ತಕ್ಕಾಗಿಯೋ  ಎಂಬಂತೆ  ಈಗಿನ  ಜನಸಂಖ್ಯಾ  ಸ್ಪೋಟದಲ್ಲಿಯೂ  ಕಲ್ಯಾಣ  ಮಂಟಪಗಳಾಗುತ್ತಿವೆ. ಇದಕ್ಕಿಂತಲೂ  ಬೇಕೇ  ಸಾಕ್ಷಿ. ಈ  ಪರಿಹಾರಕ್ಕೊಂದೇ ದಾರಿ, ಎಲ್ಲ  ಚಿತ್ರಮಂದಿರದ  ಮಾಲೀಕರ  ಆತ್ಮಸಾಕ್ಷಿಯೊಂದಿಗೆ  ಚಿತ್ರಮಂದಿರಗಳು  ಕಲ್ಯಾಣ  ಮಂಟಪಗಳಾಗುವುದು , ಇಲ್ಲವೇ  ಉತ್ತಮ  ಚಲನಚಿತ್ರಗಳ  ಬಿಡುಗಡೆಗೆ  ಮುಷ್ಕರನಿರತರಗುವುದು.

    ಡಾ || ರಾಜ್ ಕುಮಾರ್  ರವರ  ಬಗ್ಗೆ  ಅಭಿಮಾನದ  ಮಾತಿದೆ, ಮನರಂಜನೆಯ  ಮೂಲಕ  ಸಮಾಜಕ್ಕೆ  ಮತ್ತು  ಮನುಕುಲಕ್ಕೆ  ಸಂಬಂಧಿಸಿದ  ಬದುಕಿನ  ಎಲ್ಲ  ಕ್ಷೇತ್ರಗಳಿಗೂ  ಏನೇನು  ಕೊಟ್ಟಿದ್ದಾರೆ? ಅನ್ನುವುದಕ್ಕಿಂತ  ಏನು  ಕೊಟ್ಟಿಲ್ಲ? ಎನ್ನುವಂತ  ಮಾತಿದೆ  ಆದರೆ, ಅವರು ಜೀವಂತವಿದ್ದಾಗಲೇ ಇಡೀ ವಿಶ್ವಕ್ಕೆ  ಕೊಡಬೇಕಾದ  ಒಂದು  ಮಹತ್ವದ  ಉಡುಗೊರೆ  ಉಳಿದಿದೆ  ಎಂದು  ಹೇಳಿದರೆ  ತಪ್ಪಾಗಲಾರದು. ಪ್ರವೃತ್ತಿ, ವೃತ್ತಿ  ಮತ್ತು  ಸಂಸ್ಕೃತಿಯ  ಬಗ್ಗೆ  ಮನರಂಜನೆಯ  ಮೂಲಕ  ಕಲೆ  (ಜ್ಞಾನ) ಯನ್ನು  ನೀಡಿದ್ದಾರೆ, ಆದರೆ, ಇವುಗಳು  ಅವರ  ಚಿರನೆನಪು  ಸದಾ  ಕಲ  ಉಳಿಯುವಂತೆ  ಅವರ  ಹೆಸರಿನಲ್ಲಿಯೇ  ಒಂದು  ಶಿಕ್ಷಣ  ಸಂಸ್ಥೆಯನ್ನು  ಪ್ರಾರಂಬಿಸುವ  ಮೂಲಕ, ಪ್ರತ್ಯಕ್ಷ  ಸಾಕ್ಷಿಯಾಗಿ  ಅನುಭವ  ಹಾಗು  ಕಲೆ  ಈ   ಎರಡು  ಪರಸ್ಪರ  ಪ್ರತಿಬಿಂಬಿಸುತ್ತ  ಲಲಿತಕಲೆ  ಹಾಗು  ಬದುಕಿನ  ಕಲೆಗೆ  ಸಂಬಂಧಿಸಿದ, ಹಂತಹಂತವಾಗಿ  ಎಲ್ಲ  ಕ್ಷೇತ್ರಗಳಿಗೂ  ಅರ್ಹತೆಯುಳ್ಳವರಾಗಿ  ಮತ್ತು  ಉತ್ತಮ  ತರಬೇತಿಯೊಂದಿಗೆ  ಸಿದ್ಧ  ಹಸ್ತಕರಾಗಿ  ಒಂದೇ  ಸಂಸ್ಥೆಯ  ಮೂಲಕ  ಹೊರಬರುವಂತಹ  ಒಂದು  ಹೊಸ  ರೂಪದ  `ಕಲಾಶಿಕ್ಷಣ' ಕ್ಷೇತ್ರವಾಗಿ, ಇಡೀ   ವಿಶ್ವದ  ಶಿಕ್ಷಣ  ಕ್ಷೇತ್ರಕ್ಕೆ  ಅಪರೂಪದ  ಉಡುಗೊರೆಯೂ  ಆಗಬಲ್ಲ, ಹಾಗೆಯೆ  ಡಾ|| ರಾಜ್ ಕುಮಾರ್  ಅವರ  ಆತ್ಮಕ್ಕೂ  ಶಾಂತಿಯನ್ನು  ಉಂಟುಮಾಡಬಲ್ಲ   ಮತ್ತು  ಶಾಂತಿ, ಶಿಸ್ತು, ವಿಧೇಯತೆಯಿಂದ  ಭ್ರಷ್ಟಾಚಾರವನ್ನು  ಪ್ರತಿಭಟಿಸುವ  ಚಿಂತನ  ಸಾಮರ್ಥ್ಯವು  ಪ್ರತಿಯೊಬ್ಬ  ಪ್ರಜೆಗೂ  ಲಭ್ಯವಾಗುವಂತಹ  ಮತ್ತು  ಉತ್ತಮ  ಆಡಳಿತಕ್ಕೆ  ಸ್ವಚ್ಚ, ಶುದ್ಧ  ಇಂದ್ರಿಯಗಳಂತೆ  ಕಾರ್ಯ  ನಿರ್ವಹಿಸುವ  ಕಲಾವಿದರನ್ನು  ಸೃಷ್ಟಿಸುವಂತ  `ಕಲಾಶಿಕ್ಷಣ'ದ  ಅವಶ್ಯಕತೆಯಿದೆ.